Latest Media & News
Preview Media & News
ತೆಕ್ಕಲಕೋಟೆಯಲ್ಲಿ ಗೀತಾ ಜಯಂತಿ
ಭಗವಾನ್ ಶ್ರೀ ಕೃಷ್ಣನು ಅರ್ಜುನನಿಗೆ ಗೀತಾ ಬೋಧನೆ ಮಾಡಿದ ಶುಭ ಮಾರ್ಗಶೀರ್ಷ ಮಾಸದ ಶುಕ್ಲ ಏಕಾದಶಿಯಂದು ಗೀತಾ ಜಯಂತಿಯ ಆಚರಣೆಯನ್ನು ಮಾಡಲಾಗುತ್ತದೆ. ಅದರಂತೆ ಸಂಸ್ಕೃತ ಭಾರತಿಯ ಗೀತಾ ಸಪ್ತಾಹದ ನಿಮಿತ್ತ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನ ತೆಕ್ಕಲಕೋಟೆ ಯಲ್ಲಿ ಗೀತಾ ಜಯಂತಿ ಕಾರ್ಯಕ್ರಮವನ್ನು ಸಂಸ್ಕೃತ ಭಾರತೀ ಸಿರುಗುಪ್ಪ ತಾಲೂಕು ವತಿಯಿಂದ ಹಮ್ಮಿ ಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಭಗವದ್ಗೀತೆ ಸಾಮೂಹಿಕ ಪಾರಾಯಣ ಮಾಡಲಾಯಿತು. ನಂತರ ಭಗವದ್ಗೀತೆ ಮಹತ್ವವನ್ನು ದೇವಾ ಮಹೋದಯರವರು ತಿಳಿಸಿದರು. ಈ ಸಂದರ್ಭದಲ್ಲಿ ಊರಿನ ಹಿರಿಯರು, ಮಾತಾ ಭಗೀನಿಯರು ಉಪಸ್ಥಿತರಿದ್ದರು..
- Post By : North Karnataka
- |
- 25-12-2025
- |













.jpeg)















