Top
Samskrita Bharati - North Karnataka
संस्कृतभारती - उत्तरकर्णाटक
Latest Media & News
Preview Media & News

ಸಂಸ್ಕೃತ ಸಂಭಾಷಣ ಶಿಬಿರ ಸಮಾರೋಪ
ವಿಜಯವಾಣಿ 15.09.2018
ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಿಗಿಂತಲೂ ಪುರಾತನ ಭಾಷೆ ಸಂಸ್ಕೃತ ಪ್ರಪಂಚದ ಅನೇಕ ಭಾಷೆಗಳಿಗೆ ಸಂಸ್ಕೃತ ಮಾತೃಭಾಷೆಯಾಗಿದೆ ಸಂಸ್ಕೃತಕ್ಕೆ ಸಮಾನವಾದ ಭಾಷೆಯ ಮತ್ತೊಂದಿಲ್ಲ ಎಂದು ಡಾ.ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು. ಅಳಿಯ ಪುರಸಭೆ ಗಾಂಧಿಭವನದಲ್ಲಿ ಸಂಸ್ಕೃತ ಭಾರತಿ ಕರ್ನಾಟಕದ ವತಿಯಿಂದ ಹತ್ತು ದಿನಗಳ ಕಾಲ ಸಂಭಾಷಣ ಶಿಬಿರ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಶಿಕ್ಷಕ ಎಸ್ ಆರ್ ರಿತ್ತಿ ಮಾತನಾಡಿ ವೃತವು ಪುರಾತನ ಹಾಗೂ ವಿಶ್ವ ಭಾಷೆ ಜಗತ್ತಿ ಎಲ್ಲ ಭಾಷೆಗಳಲ್ಲೂ ಸಂಸ್ಕೃತ ಅತಿ ಮಹತ್ವ ಹೊಂದಿದೆ ಎಂದರು. ನಿವೃತ್ತ ಯೋಧ ವಸಂತರೆಡ್ಡಿ ತಿಮ್ಮ ರೆಡ್ಡಿ ಹಾಗೂ ಶಿಬಿರ ತರಬೇತಿ ಶಿಕ್ಷಕಿ ಚೇತನ ತಿಮ್ಮರೆಡ್ಡಿ ಅವರನ್ನು ಪೂಜ್ಯರು ಸನ್ಮಾನಿಸಿದರು. ಶ್ರೇಯಾ ಜೋಶಿ ಭರತನಾಟ್ಯ ಪ್ರಸ್ತುತಪಡಿಸಿದರು. ಅನ್ಮೋಲ ಯೋಗ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರದ ಯೋಗ ಪಟುಗಳಿಂದ ಯೋಗಾಭ್ಯಾಸ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ತಾಲೂಕು ಸಂಚಾಲಕ ಮಂಜುನಾಥ ಇಟಗಿ ಶ್ರೀನಿವಾಸ ಕಟ್ಟಿಮನಿ ದೇವಪ್ಪ ಇಟಗಿ ಬಸವರಾಜ ಬಿಳಿಮಗ್ಗದ ನಾಗರಾಜ ಮೂರಡಿ ಗಣಾಚಾರಿ ಪವನ ಮೇಟಿ ಪ್ರವೀಣ ಅರ್ಕಸಾಲಿ ಕೃಷ್ಣ ಗಾರವಾಡ ಶ್ರೀಕಾಂತ ಬಡಿಗೇರ್ ಸುರೇಶ್ ರಾಮೇನಹಳ್ಳಿ ರವೀಂದ್ರ ಗೌಡ ಪಾಟೀಲ ಮಂಗಳ ಸಜ್ಜನರ ಶಶಿಕಲಾ ಕುಕನೂರು ಗಾಯತ್ರಿ ಜೋಶಿ ವಾಣಿ ಕಟ್ಟಿಮನಿ ನೇತ್ರಾವತಿ ಅರ್ಕಸಾಲಿ ಗೀತಾ ಅರ್ಕಸಾಲಿ ಉಪಸ್ಥಿತರಿದ್ದರು. ವಿಲಾಸಕುಮಾರ ಚೆನ್ನ ಸ್ವಾಗತ ಸ್ವಾಗತಿಸಿದರು ಸಂಜೀವ ಮುಂಡರಗಿ ನಿರೂಪಿಸಿದರು ಎಲ್ಲಪ್ಪ ಅಕ್ಕಸಾಲಿ ವಂದಿಸಿದರು..


  • Post By : North Karnataka
  • |
  • 21-10-2018
  • |