ಬೆಳಗಾವಿಯ ಗೋಗಟೆ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ " ಸಂಸ್ಕೃತಪರಿಚಯವರ್ಗಃ"
ಬೆಳಗಾವಿ ನಗರದ ಗೋಗಟೆ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಒಂದು ದಿನದ ಸಂಸ್ಕೃತಪರಿಚಯವರ್ಗವನ್ನು ಆಯೋಜಿಸಲಾಗಿತ್ತು. ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಕೃತಭಾರತೀ ಸಂಘಟನೆಯ ಪರಿಚಯ ಮತ್ತು ಸಂಸ್ಕೃತ ಭಾಷೆಯ ಕಲಿಕೆಯ ಮಹತ್ವ, ವೈಜ್ಞಾನಿಕತೆಗಳ ಕುರಿತಾಗಿ ಶ್ರೀಯುತ ಶಿವರಾಮ್ ಕುಲ್ಕರ್ಣಿ ಮಹೋದಯ ತಿಳಿಸಿದರು. ಸಂಸ್ಕೃತಭಾರತೀ ನಗರಾಧ್ಯಕ್ಷ ಶ್ರೀ ಶ್ರೀಧರ್ ಗುಮ್ಮಾನಿ ನೆರೆದವರಿಗೆ ಕಾರ್ಯಕ್ರಮದ ಸಂಪೂರ್ಣ ಸ್ವಾದವನ್ನು ಸವಿಯಲು ಪ್ರೇರಣೆ ನೀಡಿದರು ಮತ್ತು ಗೋಗಟೆ ಇಂಜಿನಿಯರಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ಮುಖ್ಯಾಧಿಕಾರಿ ಶ್ರೀ ಸತೀಶ್ ದೇಶಪಾಂಡೆ ಪಾಲ್ಗೊಂಡು ಮಹಾವಿದ್ಯಾಲಯದಲ್ಲಿ ಆರಂಭಗೊಳ್ಳಲಿರುವ ಸಂಸ್ಕೃತ ಅಧ್ಯಯನ ಕೇಂದ್ರದ ಕುರಿತಾಗಿ ತಿಳಿಸಿದರು.
ಶ್ರೀಮತಿ ಸುವರ್ಣಾ ಕಿತ್ತೂರು ಸಂಸ್ಕೃತ ಸಂಭಾಷಣ ಶಿಬಿರದ ಪ್ರಾತ್ಯಕ್ಷಿಕೆ ನೀಡಿದರು. ಸಂಸ್ಕೃತದಲ್ಲಿ ಹಾಡು, ಕ್ರೀಡೆ, ಸಂಸ್ಕೃತದಲ್ಲಿ ಇರುವ ವೈಜ್ಞಾನಿಕ ಅಂಶಗಳು, ಗೀತಾಶಿಕ್ಷಣಕೇಂದ್ರಮ್, ಪತ್ರಾಲಯದ್ವಾರಸಂಸ್ಕೃತಮ್, ಮುಂಬರಲಿರುವ ಕೃಷ್ಣಾಮೃತಮ್ ಇತ್ಯಾದಿ ವಿಷಯಗಳನ್ನು ಆ ದಿನ ಸಂಸ್ಕೃತಭಾರತೀ ಕಾರ್ಯಕರ್ತರು ತಿಳಿಸಿಕೊಟ್ಟರು..
- Post By : North Karnataka
- |
- 01-06-2025
- |













.jpeg)















