ಘಟಪ್ರಭಾದಲ್ಲೊಂದು ವಿಶಿಷ್ಟವಾದ ಬಾಲಕೇಂದ್ರ
ಚಿಕ್ಕೋಡಿ ಜಿಲ್ಲೆಯ ಘಟಪ್ರಭಾದಲ್ಲಿ ಶ್ರೀಮತಿ ನಿವೇದಿತಾ ಹರೀಶ್ ಕಾಳೆಯವರು ನಾಲ್ಕು ವರ್ಷಗಳ ಹಿಂದೆ ಕೇವಲ 8 ಮಕ್ಕಳೊಂದಿಗೆ ಮುರಾರಿ ಸಂಸ್ಕೃತ ಬಾಲಕೇಂದ್ರವನ್ನು ಆರಂಭಿಸಿದರು, ಈಗ ಸುಮಾರು 80 ಮಕ್ಕಳು ಬಾಲಕೇಂದ್ರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಿರಂತರವಾಗಿ ವಾರದಲ್ಲಿ ಎರಡು ದಿನ ಬಾಲಕೇಂದ್ರವನ್ನು ನಡೆಸುತ್ತಿದ್ದಾರೆ. ಮಕ್ಕಳಿಗೆ ಸಂಸ್ಕೃತ ಶ್ಲೋಕಗಳು, ಶಿಶುಗೀತೆಗಳು, ಸಂಸ್ಕೃತ ಸಂಭಾಷಣೆಯ ಪರಿಚಯವನ್ನು ಮಾಡಿಕೊಡುವ ಮೂಲಕ ಮಕ್ಕಳನ್ನು ಸುಸಂಸ್ಕೃತರನ್ನಾಗಿಸುತ್ತಿದ್ದಾರೆ. ಮಹಾಪುರುಷರ ಜಯಂತಿಗಳ ಆಚರಣೆಯಲ್ಲಿ ಮಕ್ಕಳಿಗೆ ಅವರ ಛದ್ಮವೇಷ ಹಾಕಿಸಿ ಅವರ ಕುರಿತಾದ ಪ್ರೇರಣಾದಾಯಕ ಕಥೆಗಳನ್ನು ಹೇಳಿ ಮಕ್ಕಳನ್ನು ಜಾಗೃತರನ್ನಾಗಿಸುತ್ತಿದ್ದಾರೆ. ಮಕ್ಕಳ ಜನ್ಮದಿನವನ್ನು ಜನ್ಮತಿಥಿಯ ಪ್ರಕಾರ ಆಚರಿಸುವುದು ಹಾಗು ಮಕ್ಕಳಿಗೆ ಜನ್ಮದಿನದಿಂದು ಉಡುಗೊರೆ ತೆಗೆದುಕೊಳ್ಳುವ ಬದಲಾಗಿ ಕೊಡುವ ಅಭ್ಯಾಸ, ಮಕ್ಕಳೊಂದಿಗೆ ಮಾತೆಯರು ಆಗಮಿಸಿ ಗೀತಾ ಜಯಂತಿ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ಮಕ್ಕಳಿಗೆ ಛಾವಾ ಚಲನಚಿತ್ರವನ್ನು ತೋರಿಸಿ ನಮ್ಮ ಇತಿಹಾಸದ ಪರಿಚಯ ಮಾಡಿಸಿದ್ದು ವಿಶೇಷ.
ಸಂಸ್ಕೃತದ ಮೂಲಕ ತೊದಲು ನುಡಿಯುತ್ತಿದ್ದ ಬಾಲಕರ ತೊದಲು ನಿವಾರಣೆ ಸಹ ಆಗಿರುವುದು ಮತ್ತೊಂದು ವಿಶೇಷ. ಹತ್ತಿರದ ಕೇರಿಯಲ್ಲಿ ಮತಪರಿವರ್ತನೆಯಾಗುತ್ತಿದ್ದ ವಿಷಯವನ್ನು ಅರಿತು ಅಲ್ಲಿನ ಜನರಿಗೂ ಸಂಸ್ಕೃತದ ಮೂಲಕ ಸಂಸ್ಕೃತಿಯ ಮಹತ್ವವನ್ನು ತಿಳಿಸಿಕೊಡುತ್ತಿರುವುದು ಮಗದೊಂದು ವಿಶೇಷ.
ಘಟಪ್ರಭಾ ಆಸುಪಾಸಿನಲ್ಲಿ ಇರುವವರು ತಮ್ಮ ಮಕ್ಕಳನ್ನು ಈ ಬಾಲಕೇಂದ್ರಕ್ಕೆ ಸೇರಿಸಬಹುದು.
ಮುರಾರಿ ಸಂಸ್ಕೃತ ಬಾಲಕೇಂದ್ರಮ್
ಅಯ್ಯಪ್ಪ ಸ್ವಾಮಿ ಸನ್ನಿಧಾನ
ಸ್ವಾಮಿ ವಿವೇಕಾನಂದ ನಗರ
ಘಟಪ್ರಭಾ, ಚಿಕ್ಕೋಡಿ
ಪ್ರತಿ ಶನಿವಾರ -ಭಾನುವಾರ
ಸಂಜೆ 4 ರಿಂದ 6 ರ ವರೆಗೆ.
ಸಂಪರ್ಕ - 7411257725.
- Post By : North Karnataka
- |
- 25-03-2025
- |













.jpeg)















