Top
Samskrita Bharati - North Karnataka
संस्कृतभारती - उत्तरकर्णाटक
Latest Media & News
Preview Media & News

ಹುಬ್ಬಳ್ಳಿಯಲ್ಲಿ ಬಾಲಕೇಂದ್ರಶಿಕ್ಷಕಪ್ರಶಿಕ್ಷಣವರ್ಗಃ
ಸಂಸ್ಕೃತ ಭಾರತಿಯ ಮನೆ ಮನೆಗೆ ಸಂಸ್ಕೃತವನ್ನು ಕೊಂಡೊಯ್ಯುವ ಆಯಾಮ " ಬಾಲಕೇಂದ್ರಮ್" . ಈ ಬಾಲಕೇಂದ್ರದ ಶಿಕ್ಷಕರಾಗುವವರಿಗಾಗಿ ಸಂಸ್ಕೃತ ಭಾರತಿಯ ಉತ್ತರ ಪ್ರಾಂತದ ಹುಬ್ಬಳ್ಳಿಯ ಭಾಸ್ಕರ ಭವನ ದಲ್ಲಿ ಫೆಬ್ರವರಿ 15-16, 2025 ರಂದು " ಬಾಲಕೇಂದ್ರಶಿಕ್ಷಕಪ್ರಶಿಕ್ಷಣವರ್ಗಃ" ಹಮ್ಮಿಕೊಳ್ಳಲಾಗಿತ್ತು. 30ಕ್ಕೂ ಅಧಿಕ ವರ್ಗಾರ್ಥಿಗಳು ಉತ್ತರ ಕರ್ನಾಟಕದ ಹಲವು ವಿಭಾಗಗಳಿಂದ ಪಾಲ್ಗೊಂಡು ವರ್ಗವನ್ನು ಯಶಸ್ವಿಗೊಳಿಸಿದರು.
ಮಕ್ಕಳಿಗೆ ಸರಳ ಸಂಸ್ಕೃತ ಸಂಭಾಷಣೆಯ ಪರಿಚಯ, ಶಿಷ್ಟಾಚಾರಗಳ ಜ್ಞಾನವನ್ನು ಸಂಸ್ಕೃತ ಶಿಶುಗೀತೆಗಳ ಮೂಲಕ ತಿಳಿಸುವ ಕ್ರಮ, ಸುಭಾಷಿತಗಳು, ದಿನಚರಿ ಶ್ಲೋಕಗಳು , ದೇಶದ ಕುರಿತಾದ ಶ್ಲೋಕಗಳು, ಸಂಸ್ಕೃತದಲ್ಲಿ ಕ್ರೀಡೆ, ಮಹಾಪುರುಷರ ಪರಿಚಯ ಮತ್ತು ಅವರ ಜೀವನದಿಂದ ಪ್ರೇರಣೆ , ಭಾರತೀಯ ಸಂಸ್ಕೃತಿ ಸಂಸ್ಕಾರಗಳ ಪರಿಚಯ ಹೀಗೆ ಹಲವಾರು ವಿಷಯಗಳನ್ನು ವರ್ಗದಲ್ಲಿ ತಿಳಿಸಿಕೊಡಲಾಯಿತು.
ಸಂಸ್ಕೃತ ಭಾರತಿಯ ದಕ್ಷಿಣಮಧ್ಯಕ್ಷೇತ್ರೀಯಮಂತ್ರಿ ಶ್ರೀ ನಾಗರಾಜ್, ರಾಜ್ಯಸಂಘಟನಾಮಂತ್ರಿ ಶ್ರೀ ಲಕ್ಷ್ಮೀನಾರಾಯಣ, ಕವಯತ್ರಿ ಶ್ರೀಮತಿ ಶಾಲಿನೀ ರುದ್ರಮಣಿ, ಕುಟುಂಬ ಪ್ರಭೋದನ ಪ್ರಮುಖಾ ಮತ್ತು ಶಿಶು ತಜ್ಞೆ ಶ್ರೀಮತಿ ಕಮಲಾ ಭಟ್ಟ, ಪ್ರಾಂತಬಾಲಕೇಂದ್ರಪ್ರಮುಖಾ ಶ್ರೀಮತಿ ಸರೋಜಾ, ಆಯುರ್ವೇದ ವೈದ್ಯರಾದ ಶ್ರೀ ಜಗದೀಶ್, ಕರ್ಹಾಡ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಚಿದಂಬರ ಕಾನೇಟಕರ್, ಕಾರ್ಯದರ್ಶಿ ಶ್ರೀಮತಿ ಮಾನಸಿ ಮೋಘೆ ಉಪಸ್ಥಿತರಿದ್ದು ವರ್ಗಾರ್ಥಿಗಳಿಗೆ ಪ್ರೇರಣಾದಾಯಕ ನುಡಿಗಳಿಂದ ಪ್ರೋತ್ಸಾಹಿಸಿದರು..


  • Post By : North Karnataka
  • |
  • 19-02-2025
  • |