" ಸಂಸ್ಕೃತ ಸಪ್ತಾಹ"
🕉 ಆತ್ಮೀಯರೇ 🙏🏻 ವಂದನೆಗಳು! ಸಂಸ್ಕೃತಭಾರತೀ ಹುಬ್ಬಳ್ಳಿ ತಮ್ಮೆಲ್ಲರ ಸಹಕಾರದಿಂದ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಕೃತ ಪ್ರಸಾರ ಪ್ರಚಾರ ಕಾರ್ಯದಲ್ಲಿ ತಮ್ಮೆಲ್ಲರ ಸಹಯೋಗ ಉತ್ಸಾಹವನ್ನು ವರ್ಧಿಸುತ್ತಿದೆ.
ಕಳೆದ 23.08.2018 ರಿಂದ 29.08.2018 ರ ವರೆಗೆ ನಡೆದ " ಸಂಸ್ಕೃತ ಸಪ್ತಾಹ" ಕಾರ್ಯಕ್ರಮದಲ್ಲಿ ಸಂಸ್ಕೃತ ದಿನೋತ್ಸವ ಕಾರ್ಯಕ್ರಮಗಳು ಹಲವೆಡೆ ಸಮರ್ಪಕ ಸಂಯೋಜನೆಗಳೊಂದಿಗೆ ಆಚರಿಸಲ್ಪಟ್ಟವು.
ನಗರದ ಅಕ್ಕಿಹೊಂಡ ಹಳೇಹುಬ್ಬಳ್ಳಿನೇಕಾರನಗರ ಕೇಶ್ವಾಪುರ ರುದ್ರಾಕ್ಷಿಮಠಹುಬ್ಬಳ್ಳಿ ಗ್ರಾಮಾಂತರದ ಗಂಗಿವಾಳ ಧಾರವಾಡದ ಕಾಮನಕಟ್ಟಿ ಹೀಗೆ ಹಲವೆಡೆ ಸಂಸ್ಕೃತ ಭಾಷೆಯ ಅರಿವು ಮೂಡಿಸಲಾಯಿತು.
ಈ ವರ್ಷ "ಪತ್ರಾಚಾರ ಸಂಸ್ಕೃತ" (ಅಂಚೆಮೂಲಕ ಸಂಸ್ಕೃತ) ಪರೀಕ್ಷೆಯನ್ನು 20ಕ್ಕೂ ಅಧಿಕ ವಿದ್ಯಾರ್ಥಿಗಳು ಬರೆದಿದ್ದಾರೆ. ಇವರಲ್ಲಿ ಹುಬ್ಬಳ್ಳಿಯ ಹೆಗ್ಗೇರಿ ಆಯುರ್ವೇದ ಮಹಾವಿದ್ಯಾಲಯದ ವೈದ್ಯರುಗಳು ಸೇರಿದಂತೆ ಶಿಕ್ಷಕರುನ್ಯಾಯವಾದಿಗಳು ಉದ್ಯೋಗಿಗಳುವಿದ್ಯಾರ್ಥಿಗಳು ಗೃಹಿಣಿಯರು ಹಲವು ಕ್ಷೇತ್ರಗಳ ಸಂಸ್ಕೃತಾಭಿಮಾನಿಗಳಿರುವುದು ವಿಶೇಷ! ಪರೀಕ್ಷೆಗೆ ಸ್ಥಳಾವಕಾಶ ಮಾಡಿಕೊಟ್ಟ ವಿಜಯನಗರ ಪ್ರೌಢಶಾಲೆಯ ಮುಖ್ಯಾಧ್ಯಾಪಕರು ಸಿಬ್ಬಂದಿ ಹಾಗೂ ಕನಕದಾಸ ಶಿಕ್ಷಣ ಸಮಿತಿಯ ಪದಾಧಿಕಾರಿಗಳಿಗೂ ಅನಂತ ಕೃತಜ್ಞತೆಗಳು!
ಹಾಗೆಯೇ ಗಣ್ಯರಾದ ಡಾ. ಪಿ.ಬಿ.ಸತ್ತೂರವರು ತಮ್ಮ ಮನೆಯ ಆವರಣದಲ್ಲಿಯೇ ಸುಸಜ್ಜಿತ ಕಟ್ಟಡವೊಂದರ ಎರಡು ಕೋಣೆಗಳನ್ನು ಸಂಸ್ಕೃತಭಾರತೀ ಕಾರ್ಯಕ್ಕಾಗಿಯೇ ನೀಡಿರುವುದೂ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ಹಿರಿಯರಾದ ಶ್ರೀ.ದತ್ತಾತ್ರೇಯ ವಜ್ರಳ್ಳಿಯವರುಶ್ರೀ.ರಾಮಕೃಷ್ಣ ಮಹೋದಯ ಇವರ ಮಾರ್ಗದರ್ಶನದಲ್ಲಿ ಬಾಲಕೇಂದ್ರ ಚಾಲನಾ ಪ್ರಶಿಕ್ಷಣ ತರಬೇತಿಗಳೇ ಮೊದಲಾದ ಪೂರಕ ಕಾರ್ಯಕ್ರಮಗಳು ನಡೆಯುತ್ತಿವೆ. ಗೋವಾ ರಾಜ್ಯವಾಸಿ ಶ್ರೀಮತಿ ಮಮತಾಗೆ.ಬಾದಾಮಿ ಭಗಿನಿ ನಮ್ಮ ಕಾರ್ಯಗಳ ಗಣಕೀಕರಣಕ್ಕಾಗಿ ಉತ್ತಮ ಗಣಕಯಂತ್ರವನ್ನೂ ಕೊಡುಗೆಯಾಗಿ ನೀಡಿದ್ದಾರೆ.
ಇವರೆಲ್ಲರಿಗೂ ಸಂಸ್ಕೃತಭಾರತೀ ಆಭಾರಿಯಾಗಿದೆ !🙏🏻ಅಂತೆಯೇ ಪತಂಜಲಿ ಯೋಗ ಕೇಂದ್ರದ ರಾಜ್ಯಪ್ರಭಾರಿ ಮಾನ್ಯ ಭವರಲಾಲ್ ಆರ್ಯ ಅವರೂ ತಮ್ಮ ಕಾರ್ಯಾಲಯದಲ್ಲಿ ಸಂಸ್ಕೃತ ದಿನೋತ್ಸವಕ್ಕೆ ಸರ್ವ ಸಹಕಾರ ನೀಡಿ ಮುಂದೆಯೂ ಸಹಯೋಗದ ಭರವಸೆ ನೀಡಿರುವುದು ಸಂತಸದ ವಿಷಯ! ಶ್ರೀಯುತರಿಗೂ ಅವರ ಎಲ್ಲ ಕಾರ್ಯಕರ್ತರಿಗೂ ವಂದನೆಗಳು!
ಆತ್ಮೀಯರೇ ಇನ್ನೂ ಕಾರ್ಯಗಳು ವರ್ಧಿಸಬೇಕಾಗಿವೆ.....ಹೆಚ್ಚು ಜನ ಪತ್ರಾಚಾರ ಸಂಸ್ಕೃತ ಬಾಲಕೇಂದ್ರಗಳು ಸಂಭಾಷಣ ಶಿಬಿರಗಳು ಹೀಗೆ ಕಾರ್ಯಮಾಡಬೇಕಾಗಿದೆ.
ಬರಿಯ ಸಂದೇಶಗಳಿಂದ ಕಾರ್ಯ ಬೆಳೆಯಲಾರದು ....ನಾವೆಲ್ಲರೂ ಒಟ್ಟಿಗೆ ಈ ಕಾರ್ಯಗಳಲ್ಲಿ ತೊಡಗಿಕೊಂಡು ಸಂಪನ್ಮೂಲ ಕ್ರೋಢೀಕರಣಾದಿಯಾಗಿ ಎಲ್ಲ ಕಾರ್ಯಗಳನ್ನು ಮಾಡಬೇಕಾಗಿದೆ! ಮುಂದಿನ ಸಂವತ್ಸರ ಸಂಸ್ಕೃತ ಮನ್ವಂತರ ಸಂಸ್ಕೃತ ಯುಗ ಎನ್ನುವಲ್ಲಿ ಯಾವ ಸಂಶಯವೂ ಇಲ್ಲ! !
ಆದರಿಷ್ಟೇ....ಆ ಸಂಸ್ಕೃತ ಯುಗದಲ್ಲಿ ನಾವೂ ಭಾಗಿಯಾಗಿರುವಂತೆ ಕಾರ್ಯ ಮಾಡೋಣ! ! ಸಹಕಾರವಿರಲಿ! !🙏🏻💐
ಜಯತು ಸಂಸ್ಕೃತಮ್ ಜಯತು ಮನುಕುಲಮ್! !.
- Post By : North Karnataka
- |
- 21-10-2018
- |













.jpeg)















