ತೆಕ್ಕಲಕೋಟೆಯಲ್ಲಿ ಸಂಸ್ಕೃತದ ಕಲರವ
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆಯಲ್ಲಿ ಸಂಸ್ಕೃತದ ಕಲರವ ಶುರುವಾಗಿದೆ. ಗ್ರಾಮಸ್ಥರಲ್ಲಿ ಸಂಸ್ಕೃತದ ಕುರಿತಾಗಿ ಅಪಾರವಾದ ಆದರವು ಇದೆ. ಇದೇ ದಿಶೆಯಲ್ಲಿ ಸಂಸ್ಕೃತ ಭಾರತೀ- ಕರ್ಣಾಟಕಮ್ ಉತ್ತರಮ್ ವತಿಯಿಂದ 10 ದಿನಗಳ ಸಂಸ್ಕೃತ ಸಂಭಾಷಣ ಶಿಬಿರವನ್ನು ಆಯೋಜಿಸಲಾಗಿತ್ತು. ಗ್ರಾಮದ ಜನರು 10 ದಿನಗಳು ಉತ್ಸಾಹದಿಂದ ಪಾಲ್ಗೊಂಡು ಸಂಸ್ಕೃತ ಸಂಭಾಷಣೆಯ ಜ್ಞಾನವನ್ನು ಪಡೆದು ಸಂಸ್ಕೃತ ಕೇವಲ ಒಂದು ವರ್ಗದ ಭಾಷೆ ಅಲ್ಲ, ಕ್ಲಿಷ್ಟ ಭಾಷೆ ಅಲ್ಲ, ಕೇವಲ ದೇವ ಭಾಷೆ ಮಾತ್ರವಲ್ಲ ಮತ್ತು ಮೃತ ಭಾಷೆ ಅಲ್ಲ ಎಂಬ ಸಂದೇಶವನ್ನು ಸಾಬೀತು ನಡೆಸಿದ್ದಾರೆ.
ದಿನಾಂಕ 20-02-2025 ಗುರುವಾರ ಸಂಜೆ 5:30ಕ್ಕೆ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ 10 ದಿನ ಸಂಸ್ಕೃತ ಸಂಭಾಷಣ ಶಿಬಿರದ ಅಂತಿಮ ದಿನ ಸಮಾರೋಪ ಮತ್ತು ನಗರದ ರಾಜ ಬೀದಿಯಲ್ಲಿ ಶೋಭಾ ಯಾತ್ರೆ ಮಾಡಲಾಯಿತು. ರಾಜ ಬೀದಿಯಲ್ಲಿ ಸಂಸ್ಕೃತ ಘೋಷಣೆ, ಹಾಡು, ನೃತ್ಯ, ನಾಟಕವನ್ನು ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಶ್ರೀಯುತ ಕವಿತಾಳ ಸದಾಶಿವ(ಉದ್ಯಮಿಗಳು ), ಸಂಸ್ಕೃತ ಭಾರತೀ ಉತ್ತರ ಪ್ರಾಂತ್ಯ ಉಪಾಧ್ಯಕ್ಷರು ಶ್ರೀಯುತ ಚಂದ್ರಶೇಖರ ಮಹೋದಯ, ಶಿಬಿರ ಚಾಲಕ ಕಿರಣ್ ಕುಮಾರ ಮಹೋದಯ (ಸಂಸ್ಕೃತ ಭಾರತೀ ವಿಸ್ತರಕರು ), ಶ್ರೀಯುತ ಹುಚ್ಚಿರೇಶ್ವರ ಮಹೋದಯ (ಸಿರುಗುಪ್ಪ ತಾಲೂಕು ಸಂಯೋಜಕ)ಊರಿನ ಹಿರಿಯರು, ಮಾತಾ ಭಾಗಿನಿಯರು ಉಪಸ್ಥಿತರಿದ್ದರು..
- Post By : North Karnataka
- |
- 21-02-2025
- |













.jpeg)















