Top
Samskrita Bharati - North Karnataka
संस्कृतभारती - उत्तरकर्णाटक
Latest Media & News
Preview Media & News

ಹುಬ್ಬಳ್ಳಿಯಲ್ಲಿ ಐತಿಹಾಸಿಕ ಕಾರ್ಯಕ್ರಮ ಗೀತಾಮೃತಮ್ ಸಂಪನ್ನ
ಹುಬ್ಬಳ್ಳಿಯ ಕರ್ನಾಟಕ ಜಿಮಖಾನಾ ಅಸೋಸಿಯೇಷನ್ ಗ್ರೌಂಡ್ಸ್ ನಲ್ಲಿ ಸಂಸ್ಕೃತ ಭಾರತೀ -ಕರ್ಣಾಟಕಮ್ ಉತ್ತರಮ್ ಪ್ರಾಂತದ ವತಿಯಿಂದ *ಗೀತಾಮೃತಮ್-ಸಂಭವಾಮಿ ಯುಗೇ ಯುಗೇ* ಕಾರ್ಯಕ್ರಮ ಡಿಸಂಬರ್ 15 ರಂದು ನಡೆಯಿತು.
ಕೇಂದ್ರ ಸಚಿವ ಶ್ರೀ ಪ್ರಹ್ಲಾದ ಜೋಶಿ ಕಾರ್ಯಕ್ರಮದ ವಸ್ತು ಪ್ರದರ್ಶಿನಿ ಉದ್ಘಾಟಿಸಿ ಮಾತನಾಡಿದರು. ಮೂರು ಸಾವಿರ ಮಠದ ಡಾ. ಶ್ರೀ ಗುರುಸಿದ್ಧರಾಜ ಯೋಗೀಂದ್ರ ಸ್ವಾಮಿಗಳು ಆಶೀರ್ವಚನ ನೀಡಿದರು. ಮಜೇಥಿಯಾ ಫೌಂಡೇಷನ್ ಸಂಸ್ಥಾಪಕ ಶ್ರೀ ಜಿತೇಂದ್ರ ಮಜೇಥಿಯಾ, ವಿಭವ ಇಂಡಸ್ಟ್ರಿ ಸಿಇಓ ಶ್ರೀ ನಂದಕುಮಾರ್, ಕ್ಷಮತಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶ್ರೀ ಗೋವಿಂದ ಜೋಶಿ, ಚೆನ್ನಬಸಪ್ಪ ಹೊಸಮನಿ, ಭಾರತಿ ಪಾಟೀಲ್, ಮಹಾದೇವ ಕರಮರಿ, ಸದಾನಂದ ಕಾಮತ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
1008 ಜನ ಭಗವದ್ಗೀತೆಯ 12 ಮತ್ತು 15 ನೇ ಅಧ್ಯಾಯಗಳನ್ನು ಪಠಿಸಿದರು, ಸುಮಾರು 2500 ಜನ ಉಪಸ್ಥಿತರಿದ್ದು ಭಗವದ್ಗೀತೆಯ ಆರತಿ ಮತ್ತು ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು..


  • Post By : North Karnataka
  • |
  • 29-12-2024
  • |