Top
Samskrita Bharati - North Karnataka
संस्कृतभारती - उत्तरकर्णाटक
Latest Media & News
Preview Media & News

ಸಂಸ್ಕೃತ ಭಾರತಿ- ಕರ್ನಾಟಕ ಉತ್ತರಮ್ - ಪ್ರಬೋಧನ ವರ್ಗಃ-
ಸಂಸ್ಕೃತ ಭಾರತಿ- ಕರ್ನಾಟಕ ಉತ್ತರಮ್
ಪ್ರಬೋಧನ ವರ್ಗಃ-
ಸಂಸ್ಕೃತ ಭಾರತಿಯು ಕಳೆದ 43 ವರ್ಷಗಳಿಂದ ಸಂಸ್ಕೃತದ ಪ್ರಸಾರಕ್ಕಾಗಿ ಕೆಲಸ ಮಾಡುತ್ತಿರುವ ಒಂದು ಅಖಿಲಭಾರತೀಯ ಸಂಘಟನೆ.
ಪ್ರತಿ ವರ್ಷವೂ ಸಂಸ್ಕೃತ ಅಭ್ಯಾಸಿಗಳಿಗೆ ಅನೇಕ ವಿಧದ ವರ್ಗಗಳನ್ನು ಸಂಸ್ಕೃತ ಭಾರತೀ ನಡೆಸುತ್ತಿದೆ. ಅಂತೆಯೇ ಈ ವರ್ಷವೂ ಸಹ ಏಳು ದಿನಗಳ ಆವಾಸೀಯ ವರ್ಗವು ರಾಣಿಬೆನ್ನೂರಿನಲ್ಲಿ ನಡೆಯಲಿದೆ.
ವರ್ಗದ ದಿನಾಂಕ -2025 ಏಪ್ರಿಲ್ 2 ರಿಂದ 8 ರವರೆಗೆ.
ವರ್ಗ ಸ್ಥಾನ- ರೈನ್ ಬೋ ವಿದ್ಯಾಲಯ, ರಾಣಿಬೆನ್ನೂರು
ಈ ವರ್ಗಕ್ಕೆ ಅಪೇಕ್ಷಿತರು-
10 ದಿನದ ಸಂಸ್ಕೃತ ಸಂಭಾಷಣ ಶಿಬಿರದಲ್ಲಿ ಭಾಗವಹಿಸಿದವರು, ಸರಳ ಸಂಸ್ಕೃತ ಸಂಭಾಷಣೆಯ ಸಾಮಾನ್ಯ ಜ್ಞಾನ ಇರುವವರು, ಸರಳ ಸಂಸ್ಕೃತ ಪರೀಕ್ಷೆಯನ್ನು ಬರೆದ ಹಿರಿಯರು, ಸಂಭಾಷಣ ಸಂದೇಶದ ಗ್ರಾಹಕರು, ಅಂಚೆ ಮೂಲಕ ಸಂಸ್ಕೃತದ ವಿದ್ಯಾರ್ಥಿಗಳು, ಮತ್ತು ನಿತ್ಯ ಸಂಸ್ಕತಂ ವರ್ಗದಲ್ಲಿ ಭಾಗವಹಿಸಿದವರು . ಶಿಕ್ಷಾರ್ಥಿಗಳು 16 ವರ್ಷ ಮೇಲ್ಪಟ್ಟವರಾಗಿರಬೇಕು. ಗರಿಷ್ಠ ವಯೋಮಿತಿ 50 ವರ್ಷಗಳು.
ಸಾಮಾನ್ಯ ಸೂಚನೆಗಳು:-
ಶಿಕ್ಷಾರ್ಥಿಗಳು ಒಂದು ವಾರದ ವಸತಿಗೆ ಆವಶ್ಯಕವಾದ ದಿನಬಳಕೆಯ ವಸ್ತುಗಳನ್ನು ಹಾಗೂ ಹಾಸುವ, ಹೊದೆಯುವ ವಸ್ತ್ರಗಳನ್ನು ತರಬೇಕು. ಆಭರಣ, ಲ್ಯಾಪ್ಟಾಪ್ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ತರಬಾರದು. ಮಹಿಳೆಯರಿಗೆ ಪ್ರತ್ಯೇಕವಾದ ಯೋಗ್ಯ ವಸತಿ ವ್ಯವಸ್ಥೆ ಇರುತ್ತದೆ. ಪೂರ್ವಸೂಚನೆ ಇಲ್ಲದೇ ಬಂದವರಿಗೆ ವರ್ಗದಲ್ಲಿ ಪ್ರವೇಶ ಇರುವುದಿಲ್ಲ. ಶಿಕ್ಷಾರ್ಥಿಗಳು ಕೆಳಗಿನ ಲಿಂಕ್ ಉಪಯೋಗಿಸಿ ಗೂಗಲ್ ಫಾರ್ಮ್ ನಲ್ಲಿ ತಮ್ಮ ಹೆಸರು, ವಿಳಾಸ ಇತ್ಯಾದಿ ವಿವರಗಳನ್ನು ಭರ್ತಿ ಮಾಡಿ ನೋಂದಾಯಿಸಬೇಕು.
ವರ್ಗಕ್ಕೆ ಹೆಸರನ್ನು ನೋಂದಾಯಿಸಲು ಅಂತಿಮ ದಿನಾಂಕ 20 ಮಾರ್ಚ್ 2025 .
ಶುಲ್ಕ ರೂ.700-00
ವರ್ಗದಲ್ಲಿ ಸಂಸ್ಕೃತ ಸಂಭಾಷಣೆ, ಪ್ರಾಥಮಿಕ ಸಂಸ್ಕೃತ ವ್ಯಾಕರಣ, ಯೋಗ, ಪ್ರಾಣಾಯಾಮ ಇತ್ಯಾದಿ ಶಿಕ್ಷಣ ನೀಡಲಾಗುವುದು. ಸಂಸ್ಕೃತದಲ್ಲಿ ಕ್ರೀಡೆ, ಮನರಂಜನೆ ಇತ್ಯಾದಿಗಳೂ ಇರುತ್ತವೆ.
ಹೆಚ್ಚಿನ ವಿವರಗಳಿಗೆ ಸಂಪರ್ಕ ಸಂಖ್ಯೆ- 8095623266, 9740168128,
ವಿಶೇಷ ಸೂಚನೆ:
ಈ ವರ್ಗ ಕೇವಲ ಉತ್ತರ ಕರ್ನಾಟಕದವರಿಗೆ ಮಾತ್ರ..


  • Post By : North Karnataka
  • |
  • 08-03-2025
  • |