Top
Samskrita Bharati - North Karnataka
संस्कृतभारती - उत्तरकर्णाटक
Latest Media & News
Preview Media & News

ಧಾರವಾಡದಲ್ಲಿ ಭಾಷಾಬೋಧನವರ್ಗಃ
ಸಂಸ್ಕೃತಭಾರತೀ ಕರ್ಣಾಟಕ- ಉತ್ತರ ಪ್ರಾಂತದ ವತಿಯಿಂದ, ಸಂಸ್ಕೃತ ಭಾಷೆಯ ಪ್ರಸಾರದ ಉದ್ದೇಶದಿಂದ ಈ ವರ್ಷದ ಭಾಷಾಬೋಧನ ವರ್ಗವನ್ನು ಧಾರವಾಡದ ಅದ್ವೈತಿ ಪ್ರಬೋಧಕ ಸಂಘದ ಪಾಠಶಾಲೆಯಲ್ಲಿ ಜೂನ್ 6,7,8 2025 ರಂದು ನೆರವೇರಿಸಲಾಯಿತು. ವರ್ಗದಲ್ಲಿ ವಿವಿಧ ಜನಪದಗಳಿಂದ 38 ಶಿಕ್ಷಾರ್ಥಿಗಳು ಆಗಮಿಸಿ ಈ ವರ್ಗದ ಫಲವನ್ನು ಪಡೆದರು. ಸಂಸ್ಕೃತ ಸಂಭಾಷಣೆ, ಪ್ರಾಥಮಿಕ ವ್ಯಾಕರಣದ ಪರಿಚಯ, ಸಂಸ್ಕೃತ ಗೀತೆಗಳು, ಕಥೆಗಳು, ವಾಕ್ - ವಿನೋದಗಳೊಂದಿಗೆ ಸಂಪೂರ್ಣ ಸಂಸ್ಕೃತಮಯ ವಾತಾವರಣದಲ್ಲಿ ಸಂಸ್ಕೃತ ಭಾಷೆಯ ಪರಿಚಯವನ್ನು ಮಾಡಿಕೊಡಲಾಯಿತು. ಈ ವರ್ಗದ ಮೂಲಕ ಧಾರವಾಡದಲ್ಲಿ ಸಂಸ್ಕೃತ ಭಾಷೆಯನ್ನು ಮುಖ್ಯ ವಾಹಿನಿಗೆ ತರುವುದರಲ್ಲಿ ಸಂಸ್ಕೃತಭಾರತೀ ವತಿಯಿಂದ ಒಂದು ದೃಢ ಹೆಜ್ಜೆ ಇಡಲಾಯಿತು..


  • Post By : North Karnataka
  • |
  • 10-06-2025
  • |