Top
Samskrita Bharati - North Karnataka
संस्कृतभारती - उत्तरकर्णाटक
Latest Media & News
Preview Media & News

ಹುಬ್ಬಳ್ಳಿಯಲ್ಲಿ ಬಾಲಕೇಂದ್ರಗಳ ವಾರ್ಷಿಕೋತ್ಸವ
ಸಂಸ್ಕೃತ -ಸಂಸ್ಕೃತಿ -ಸಂಸ್ಕಾರ ಎಲ್ಲವನ್ನೂ ಮಕ್ಕಳಿಗೆ ತಿಳಿಸಿಕೊಡುವ ಸಂಸ್ಕೃತಭಾರತಿಯ ಪ್ರಸಿದ್ಧ ಆಯಾಮವೇ " ಬಾಲಕೇಂದ್ರಮ್" . ಒಂದು ವರ್ಷದ ಅವಧಿಯಲ್ಲಿ ಬಾಲಕೇಂದ್ರದಲ್ಲಿ ಕಲಿತ ವಿಷಯಗಳನ್ನು ಬಾಲಕೇಂದ್ರದ ವಾರ್ಷಿಕೋತ್ಸವದಲ್ಲಿ ಮಕ್ಕಳು ಪ್ರದರ್ಶಿಸುತ್ತಾರೆ. ಈ ವರ್ಷ ಹುಬ್ಬಳ್ಳಿಯ 7 ಬಾಲಕೇಂದ್ರಗಳು ಒಟ್ಟಾಗಿ ಸೇರಿ ವಾರ್ಷಿಕೋತ್ಸವವನ್ನು ಆಚರಿಸಿದ್ದು ವಿಶೇಷ. ಜನವರಿ 25, 2026 ರಂದು ಅಕ್ಷಯ ಕಾಲೋನಿಯ ಮಾರುತಿ ಮಂದಿರದಲ್ಲಿ ಕಾರ್ಯಕ್ರಮ ನಡೆಯಿತು. ಸುಮಾರು 80 ಮಕ್ಕಳು ಸಂಸ್ಕೃತದಲ್ಲಿ ನೃತ್ಯ, ನಾಟಕ, ಹಾಡು, ಶ್ಲೋಕ ಪಠಣ, ಕಥಾ ವಾಚನಗಳಿಂದ ನೆರೆದವರ ಮನ ಸೆಳೆದರು. ಜಿಹ್ವೇಶ್ವರ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಭುವನೇಶ್ವರಿ ಪಿ ಅಂಗಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾಂತ ಶ್ಲೋಕ-ಪಾಠನ-ಕೇಂದ್ರದ ಪ್ರಮುಖಾ ಶ್ರೀಮತಿ ಅನುರಾಧಾ ಪಟ್ಟಾಭಿ ಉಪಸ್ಥಿತರಿದ್ದರು..


  • Post By : North Karnataka
  • |
  • 28-01-2026
  • |