ಹುಬ್ಬಳ್ಳಿಯಲ್ಲಿ ಬಾಲಕೇಂದ್ರ ಶಿಕ್ಷಕ ಪ್ರಶಿಕ್ಷಣ ವರ್ಗ
ಪ್ರತಿ ವರ್ಷದಂತೆ ಈ ವರ್ಷವು ಸಹ ಸಂಸ್ಕೃತಭಾರತೀ ಉತ್ತರ ಕರ್ನಾಟಕ ಪ್ರಾಂತದ ವತಿಯಿಂದ ಬಾಲಕೇಂದ್ರ ಶಿಕ್ಷಕ ಪ್ರಶಿಕ್ಷಣ ವರ್ಗವನ್ನು ಆಯೋಜಿಸಲಾಗಿತ್ತು. ಡಿಸೆಂಬರ್ 13-14, 2025 ರಂದು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಇರುವ ಭಾಸ್ಕರ ಭವನದಲ್ಲಿ ವರ್ಗವು ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಜಯಪ್ರಕಾಶ ಟೆಂಗಿನಕಾಯಿ ಮಾತನಾಡಿ ಸಂಸ್ಕೃತ ಭಾಷೆಯ ವೈಜ್ಞಾನಿಕತೆ ಕುರಿತಾಗಿ ನೆರೆದವರಿಗೆ ತಿಳಿಸಿದರು. ಉತ್ತರ ಕರ್ನಾಟಕದ ಹಲವೆಡೆ ಇಂದ ಸುಮಾರು 65 ಶಿಕ್ಷಾರ್ಥಿಗಳು ವರ್ಗದಲ್ಲಿ ಪಾಲ್ಗೊಂಡಿದ್ದರು.
ಸಂಸ್ಕೃತ ಸಂಭಾಷಣೆ, ಶ್ಲೋಕಗಳು, ಸುಭಾಷಿತಗಳು, ಸಂಸ್ಕೃತದಲ್ಲಿ ಕಥೆ, ಕ್ರೀಡಾ, ಶಿಶುಗೀತೆಗಳು, ಶಿಷ್ಟಾಚಾರಗಳ ಜ್ಞಾನ ಎಲ್ಲವನ್ನೂ ಮಕ್ಕಳಿಗೆ ಹೇಗೆ ಕಲಿಸಬೇಕೆಂದು ಈ ವರ್ಗದಲ್ಲಿ ತಿಳಿಸಿಕೊಡಲಾಯಿತು. ಸಮಾರೋಪದಲ್ಲಿ ಶ್ರೀ ನಾಗರಾಜ್ ದವಟೆ ಪಾಲ್ಗೊಂಡಿದ್ದರು. ಸಂಸ್ಕೃತ ಭಾರತಿಯ ಕ್ಷೇತ್ರೀಯ ಸಂಘಟನ ಮಂತ್ರಿ ಶ್ರೀ ನಾಗರಾಜ್ ಮಹೋದಯ, ಕರ್ನಾಟಕ ರಾಜ್ಯ ಸಂಘಟನ ಮಂತ್ರಿ ಶ್ರೀ ಲಕ್ಷ್ಮೀನಾರಾಯಣ ಮಹೋದಯ, ಉಪಾಧ್ಯಕ್ಷಾ ಶ್ರೀಮತಿ ಶಾರದಾ ಕುಲಕರ್ಣಿ ಭಗಿನೀ, ಪ್ರಾಂತ ಬಾಲಕೇಂದ್ರಪ್ರಮುಖಾ ಶ್ರೀಮತಿ ಸರೋಜಾ ಭಗಿನೀ ಮತ್ತಿತರರು ಉಪಸ್ಥಿತರಿದ್ದರು..
- Post By : North Karnataka
- |
- 15-12-2025
- |













.jpeg)















